
9th October 2024
ಬೆಳಗಾವಿ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಕೋಶದ ಉದ್ಘಾಟನೆ ಮತ್ತು ಪಿಸಿಒಎಸ್ ಅರಿವು ಕಾರ್ಯಕ್ರಮವನ್ನು ಬುಧವಾರದಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಸ್ತ್ರೀ ರೋಗ ತಜ್ಞೆಯಾದ ಡಾ. ಶೋಭನಾ ಪಟ್ಟೇದ್ ಅವರು ಉದ್ಘಾಟಿಸಿ ಮಾತನಾಡಿದರು. ಪಿಸಿಒಎಸ್ ಕುರಿತು ಪ್ರತಿಯೊಬ್ಬ ಮಹಿಳೆಯೂ ತಿಳಿದುಕೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಇದರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಿರಂತರ ನಡೆಯುತ್ತಿರಬೇಕು. ಪ್ರತಿಯೊಬ್ಬರು ರೋಗದ ಲಕ್ಷಣಗಳನ್ನು ಮೊದಲು ಅರಿತಿರಬೇಕು. ಇದರಿಂದ ರೋಗವನ್ನು ಆರಂಭದಲ್ಲೇ ತಡೆಗಟ್ಟಬಹುದು. ಪಿಸಿಒಎಸ್ ಮತ್ತು ಪಿಸಿಓಡಿಯಂತಹ ರೋಗಗಳು ಬಂದಾಗ ಕೂದಲು ಉದುರುವಿಕೆ, ಅನಿಯಮಿತ ಋತುಚಕ್ರ, ಚರ್ಮದಲ್ಲಿ ಮೊಡವೆಗಳು ಹೆಚ್ಚುವಿಕೆ, ತೂಕ ಹೆಚ್ಚಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂತಹ ಲಕ್ಷಣಗಳು ಕಂಡು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವಿದ್ಯಾರ್ಥಿನಿಯರು ತಮ್ಮ ಜೀವನಶೈಲಿಯನ್ನು ಬದಲಾಯಾಸಿಕೊಳ್ಳುವುದರ ಜೊತೆಗೆ ಆರೋಗ್ಯದ ಕುರಿತು ಗಮನಹರಿಸಬೇಕು. ಆಗ ಇಂತಹ ರೋಗಗಳಿಂದ ದೂರವಿರಬಹುದು. ಇತ್ತೀಚಿನ ಆಹಾರ ಪದ್ಧತಿಯು ಮಹಿಳಾ ಆರೋಗ್ಯದ ಮೇಲೆ ಋಣಾತ್ಮಕವಾದ ಪರಿಣಾಮ ಬೀರುತ್ತಿದೆ. ಇದು ಪಿಸಿಒಎಸ್ ದಂತಹ ರೋಗಗಳಿಗೆ ಕಾರಣವಾಗುತ್ತದೆ. ಇದರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಆಪ್ತ ಸಮಾಲೋಚನೆ ನಡೆಸಿದರು.
ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರ್ಜುನ್ ಜಂಬಗಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಈಗಿನ ಒತ್ತಡದ ಜೀವನ, ಅನಿಯಮಿತ ಆಹಾರ ಸೇವನೆಯಿಂದ ಅನೇಕ ರೋಗಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ಜಂಕ್ ಫುಡ್ ತ್ಯಜಿಸುವುದು, ನಿದ್ರಾಹೀನತೆಯಿಂದ ಹೊರಬರುವುದು, ನಿಯಮಿತವಾದ ವ್ಯಾಯಮ, ಉತ್ತಮವಾದ ಜೀವನಶೈಲಿಗಳನ್ನು ರೂಢಿಸಿಕೊಳ್ಳುವುದರಿಂದ ರೋಗಗಳಿಂದ ಮುಕ್ತರಾಗಬಹುದು ಎಂದರು.
ವಿದ್ಯಾರ್ಥಿನಿ ಶಾಂಭವಿ ಥೋರ್ಲಿ ಪ್ರಾರ್ಥಿಸಿದರು. ಉಪನ್ಯಾಸಕಿ ಆಸ್ಮಾ ದಾದೀಬಾಯಿ ಸ್ವಾಗತಿಸಿದರು. ಉಪನ್ಯಾಸಕಿ ಜಯಶ್ರೀ ಉಪರಿ ಪರಿಚಯಿಸಿದರು. ಡಾ. ಮೃಣಾಲ ಕಂಗರಾಳಕರ ವಂದಿಸಿದರು.
ಡಾ. ಪ್ರೀತಿ ಪದಪ್ಪಗೋಳ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಆದಿನಾಥ ಉಪಾಧ್ಯೆ ಹಾಗೂ ಮಹಾವಿದ್ಯಾಲಯದ ಮಹಿಳಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಿ:-ಬಿ.ಫೌಜಿಯಾ ತರನ್ನುಮ್
ಶಿಕ್ಷಣದಿಂದ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಸಾಧ್ಯ :ಶಾಸಕ ತುನ್ನೂರ
ಜನಪದ ಸಾಹಿತ್ಯದ ತಾಯಿ ಬೇರು: ಹಮೀದಾ ಬೇಗಂ ದೇಸಾಯಿ ಪೃಥ್ವಿ ಫೌಂಡೇಶನ್ ದಿಂದ " ಜಾನಪದ ಸಂಭ್ರಮ" ಕಾರ್ಯಕ್ರಮ
ಗಣಿತ ವಿಜ್ಞಾನದ ತಾಯಿ ಬೇರು : ಪ್ರಾಚಾರ್ಯ ಎಂ. ಜಿ. ಹೆಗಡೆ ಗಣಿತ ವಿಜ್ಞಾನದ ತಾಯಿ ಬೇರು. ವೈಜ್ಞಾನಿಕ ಸಂಶೋಧನೆಯು ಗಣಿತದ ಮೇಲೆಯೇ ಅವಲಂಬಿಸಿದೆ ಎಂದು ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು ಅಭಿಪ್ರಾಯಪಟ್ಟರು.